ಕಳೆದ ಒಂದುವರೆ ವರ್ಷದ ಹಿಂದೆ ಘೋಷಣೆಯಾಗಿದ್ದ, ಸುದೀಪ್- ರವಿಚಂದ್ರನ್ ಮುಖ್ಯಪಾತ್ರದಲ್ಲಿರುವ 'ಹೆಬ್ಬುಲಿ' ಚಿತ್ರದ ಚಿತ್ರೀಕರಣ ಇದೇ ತಿಂಗಳ 18 ರಂದು ಪ್ರಾರಂಭವಾಗಲಿದೆ. ಸುದೀಪ್ ಬೇರೆ ಚಿತ್ರಗಳಲ್ಲಿ ವ್ಯಸ್ತರಾಗಿದ್ದರಿಂದ ಸಿನಿಮಾ ನಿರ್ಮಾಣ ಇಷ್ಟು ವಿಳಂಬವಾಗಿದೆ.
ಎಸ್ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾವನ್ನು ರಘುನಾಥ್ ಮತ್ತು ಸತ್ಯನಾರಾಯಣ್ ನಿರ್ಮಿಸುತ್ತಿದ್ದಾರೆ. ಎಪ್ರಿಲ್ 25 ರಿಂದ ನಿಯಮಿತ ಶೂಟಿಂಗ್ ಪ್ರಾರಂಭವಾಗಲಿದೆ. ಮಾಣಿಕ್ಯ ಸಿನಿಮಾದ ಬಳಿಕ ರವಿಚಂದ್ರನ್ ಮತ್ತು ಸುದೀಪ್ ಮತ್ತೆ ಒಂದಾಗುತ್ತಿರುವುದು ಚಿತ್ರದ ವಿಶೇಷ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಯುತ್ತಿದ್ದು ಸಿನಿಮಾಕ್ಕೆ ಬರೊಬ್ಬರಿ 25 ರಿಂದ 30 ಕೋಟಿ ಸುರಿಯಲಾಗುತ್ತಿದೆ ಎಂಬ ಸುದ್ದಿ ಇದೆ.
ಸುದೀಪ್ ಮತ್ತು ರವಿಚಂದ್ರನ ನಿರ್ವಹಿಸುತ್ತಿರುವ ಪಾತ್ರದ ವಿವರ ಇನ್ನು ಕೂಡ ಲಭ್ಯವಾಗಿಲ್ಲ. ಇಬ್ಬರು ನಾಯಕರಿಗೆ ನಾಯಕಿಯರನ್ನು ಅಂತಿಮಗೊಳಿಸಬೇಕಿದ್ದು, ಚಿಕ್ಕಣ್ಣ, ರವಿಶಂಕರ್ ಕೂಡ ಪ್ರಧಾನ ಭೂಮಿಕೆಯಲ್ಲಿದ್ದಾರೆ.
ಕಥೆ, ಚಿತ್ರಕಥೆ ಎಸ್ ಕೃಷ್ಣಾ ಅವರೇ ಬರೆದಿದ್ದು, ಅರ್ಜುನ್ ಜನ್ಯಾ ಸಂಗೀತ ನೀಡಲಿದ್ದಾರೆ.
ಕರುಣಾಕರ್ ಛಾಯಾಗ್ರಹಣ ಮಾಡುತ್ತಿದ್ದು ಬೆಂಗಳೂರು, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ್, ಮೈಸೂರು, ಹೈದರಾಬಾದ್, ಬಳ್ಳಾರಿ, ಬೆಂಗಳೂರು, ಐಸ್ ಲ್ಯಾಂಡ್ ಮತ್ತು ನಾರ್ವೆಯಲ್ಲಿ ಚಿತ್ರೀಕರಣ ಮಾಡಲಾಗುವುದು ಎಂದು ತಿಳಿದು ಬಂದಿದೆ.

0 comments:
Post a Comment