Bollywood

ಹೃದಯ ಹಿಂಡುತ್ತಿದೆ ಪ್ರತ್ಯುಷಾ ಕೊನೆಯ ವಾಟ್ಸಪ್ ಸ್ಟೇಟಸ್

ಶುಕ್ರವಾರ ಸಾವಿಗೆ ಶರಣಾದ ಬಾಲಿಕಾ ವಧು ಖ್ಯಾತಿಯ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಸಾವಿಗೂ ಮುನ್ನ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಆದರೆ ಅವರು ತಮ್ಮ ವಾಟ್ಸ್‌ಅಪ್‌ಗೆ ಹಾಕಿರುವ ಕೊನೆಯ ಸ್ಟೇಟಸ್ ಪ್ರೀತಿ-ಪ್ರೇಮದ ವಿಚಾರದಲ್ಲಿ ಮನನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆಯನ್ನು ಪ್ರಬಲವಾಗಿಸಿದೆ.

ನಮ್ಮ ಕಂಗಳನ್ನು ಒದ್ದೆ ಮಾಡುವಂತ ಅವರ ವಾಟ್ಸಪ್ ಸ್ಟೇಟಸ್ ಹೀಗಿದೆ:  'ಮರ್ಕೆ ಬಿ ಮುಹ್ ನಾ ತುಜ್ಸೆ ಮೋಡನಾ' (ಸತ್ತ ಮೇಲೂ ಕೂಡ ನಾ ನಿನ್ನೆಡೆಯಿಂದ ಮುಖ ತಿರುಗಿಸುವುದಿಲ್ಲ).

ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರದ ಮೂಲಕ ಮನೆಮಾತಾಗಿದ್ದ ಖ್ಯಾತಿಯ ಪ್ರತ್ಯೂಷ್ಯಾ ಬ್ಯಾನರ್ಜಿ (24) ಮುಂಬೈನ ಸಬ್ ಅರ್ಬನ್‌ ಕಾಂಡಿವಲಿ ಸಮೀಪದ ಬಂಗುರ್ ನಗರ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿನ್ನೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

24 ವರ್ಷದ ಪ್ರತ್ಯೂಷಾ ಫ್ಯಾನ್‌ಗೆ ನೇತಾಡುತ್ತಿರುವುದನ್ನು ನೋಡಿದ ಅವರ ತಾಯಿ ಕೂಡಲೇ ಅವರನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲಾಗಲೇ ಪ್ರತೂಷ್ಯಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಈ ದುಡುಕಿನ ನಿರ್ಧಾರಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಪ್ರೇಮಿ ರಾಹುಲ್ ಸಿಂಗ್ ಜತೆಯಲ್ಲಿ ಆಕೆಯ ಸಂಬಂಧ ಹಳಸಿದ್ದುದೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ.

ಝಲಕ್‌ ದಿಖ್ಲಾ ಜಾ 5’ರಲ್ಲಿ ಪಾಲ್ಗೊಂಡಿದ್ದ ಅವರು ‘ಬಿಗ್‌ ಬಾಸ್‌7’ ರಲ್ಲೂ  ಭಾಗವಹಿಸಿದ್ದರು. ‘ಪ್ಯಾರ್‌ ತೂನೆ ಕ್ಯಾ ಕಿಯಾ’, ‘ಹಮ್‌ ಹೈ ನಾ’, 'ಸಸುರಾಲ್ ಸಿಮರ್ ಕಾ' ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದರು.

About jaya G B

0 comments:

Post a Comment

Powered by Blogger.