ಬಹು ನಿರೀಕ್ಷಿತ 'ತಲೆ ಬಾಚ್ಕೊಳ್ಳಿ ಪೌಡರ್ ಹಾಕೊಳ್ಳಿ' ಸಿನಿಮಾ ಇದೇ ತಿಂಗಳು ತೆರೆ ಕಾಣುತ್ತಿದೆ. ಜಯಣ್ಣಾ ಫಿಲ್ಮ್ಸ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ. ವಿಕ್ರಮ್ ಆರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ತಮ್ಮ ನಿಜ ನಾಮಧೇಯ ನಾಮದೇವ್ ಭಟ್ಟರ್ ಹೆಸರಲ್ಲಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಈಗಾಗಲೇ ಎರಡು ಸಿನಿಮಾಗಳನ್ನು ನಿರ್ದೇಶಿಸಿರುವ ವೇಣುಗೋಪಾಲ್ ಅವರೇ ಈ ಸಿನಿಮಾಕ್ಕೆ ಆ್ಯಕ್ಸನ್ ಕಟ್ ಹೇಳಿದ್ದು ಚಿತ್ರಕಥೆ ಸಹ ಅವರದೇ.
ಇತ್ತೀಚಿಗೆ ನಿಧನರಾದ ವಿಜಯ್ ಭಾರತಿ ಸಂಗೀತ ಸಂಯೋಜನೆಯಲ್ಲಿ ಚಿತ್ರ ಮೂಡಿ ಬರುತ್ತಿದೆ.
ನಿಕಿತಾ ತುಕ್ರಾಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಚಿಕ್ಕಣ್ಣ, ರಮೇಶ್ ಭಟ್ , ಶೋಭ್ ರಾಜ್, ಬುಲೆಟ್ ಪ್ರಕಾಶ್, ಸುರೇಶ್, ಹೊನ್ನವಳ್ಳಿ ಕೃಷ್ಣ, ಬಿರಾದಾರ್ ಮುಖ್ಯ ಪಾತ್ರಗಳಲ್ಲಿ ರಂಜಿಸಲಿದ್ದಾರೆ.
0 comments:
Post a Comment