Cinema News

ಪುಷ್ಪಕ ವಿಮಾನವನ್ನೇರಿ ರಮೇಶ್ ಶತಕ

ತಮ್ಮ ಮನೋಜ್ಞ ಅಭಿನಯದ ಮೂಲಕ ಕನ್ನಡದ ಸಿನಿಮಾ ಜಗತ್ತು ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರೆನಿಸಿಕೊಂಡಿರುವ ರಮೇಶ್ ಅರವಿಂದ್, 'ಪುಷ್ಪಕ ವಿಮಾನ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಶತಕವನ್ನು ಪೂರೈಸಲಿದ್ದಾರೆ. ಥಾಯ್ ಸಿನಿಮಾ ಆಧಾರಿತ 'ಪುಷ್ಪಕ ವಿಮಾನ'  ವಿಭಿನ್ನ, ವಿಶಿಷ್ಟ ಚಿತ್ರವಾಗಿದ್ದು ಈ ಚಿತ್ರದ ಮೂಲಕ ತಮ್ಮ ಕನ್ನಡ ಸಿನಿ ಬದುಕಿನ 100ನೇ ಮೈಲಿಗಲ್ಲನ್ನು ದಾಟುತ್ತಿರುವುದು ನಟನಿಗೆ ಬಹಳ ಸಂತೋಷ ತಂದಿದೆಯಂತೆ. ಟೀಸರ್ ಪ್ರೇಕ್ಷಕರಲ್ಲಿ ಕೆರಳಿಸಿದ್ದ ಆಸಕ್ತಿಯನ್ನು ಸಿನೆಮಾ ಉಳಿಸಿಕೊಳ್ಳಲಿದೆ ಎಂಬ ಭರವಸೆ ಅವರದು.

ಕನ್ನಡ, ತಮಿಳು, ತೆಲುಗು ಭಾಷೆ ಸೇರಿದಂತೆ ಪಂಚಭಾಷಾತಾರೆಯಾಗಿರುವ ಅವರು 140ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಕನ್ನಡದಲ್ಲಿ ಅವರದ್ದು ಇದು 100ನೇ ಸಿನಿಮಾ. ರಮೇಶ್ , ಕೆ. ಬಾಲಚಂದರ್ ಅವರ 'ಸುಂದರ ಸ್ವಪ್ನಗಳು' ಚಿತ್ರದ ಮೂಲಕ ಸಿನಿ ದುನಿಯಾಕ್ಕೆ ಪಾದಾರ್ಪಣೆ ಮಾಡಿದ್ದರು.

ಸಿನಿಮಾ ರಂಗದಲ್ಲಿನ ದೀರ್ಘ ಪಯಣದ ಬಗ್ಗೆ ಕೇಳಿದರೆ ತಮ್ಮ ಹಿಂದಿನ ಸಾಧನೆಗಳನ್ನು ನೆನಪಿಸಿಕೊಳ್ಳುವುದಕ್ಕಿಂತ ಮುಂದಿನ ಕೆಲಸದ ಬಗ್ಗೆಯೇ ನನಗೆ ಹೆಚ್ಚು ಚಿಂತೆ ಕಾಡುತ್ತದೆ ಎನ್ನುತ್ತಾರೆ  ಅವರು.

ಎಸ್ ರವೀಂದ್ರನಾಥ್ 'ಪುಷ್ಕಕ ವಿಮಾನ' ಚಿತ್ರವನ್ನು ನಿರ್ದೇಶಿಸುತ್ತಿದ್ದು ಬಾಲಿವುಡ್ ಖ್ಯಾತ ತಾರೆ ಜೂಹಿ ಚಾವ್ಲಾ ಮತ್ತೆ ಕನ್ನಡಕ್ಕೆ ಮರಳಿರುವುದು ವಿಶೇಷವೆನಿಸಿದೆ. ಬುಲ್ ಬುಲ್ ಖ್ಯಾತಿಯ ರಚಿತಾ ರಾಮ್  ಸಹ ಮುಖ್ಯ ಭೂಮಿಕೆಯಲ್ಲಿದ್ದು ಅಪ್ಪ-ಮಗಳ ನಡುವಿನ ಭಾವನಾತ್ಮಕ ಸಂಬಂಧ ಚಿತ್ರದ ಕಥಾವಸ್ತುವಾಗಿದೆ.

About jaya G B

0 comments:

Post a Comment

Powered by Blogger.