ದುಡುಕಿನ ನಿರ್ಧಾರ ಕೈಗೊಂಡು ಸಾವಿಗೆ ಶರಣಾದ ಪ್ರತ್ಯೂಷಾ ಬ್ಯಾನರ್ಜಿ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ. ಸಾಯುವಾಗ ಆಕೆ ಗರ್ಭಿಣಿಯಾಗಿದ್ದಳೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಪ್ರಮುಖ ರಾಷ್ಟ್ಪೀಯ ದಿನಪತ್ರಿಕೆಯೊಂದು ನಟಿ ಗರ್ಭಾವಸ್ಥೆಯಲ್ಲಿದ್ದಿರಬಹುದು ಎಂಬ ಸುದ್ದಿಯನ್ನು ಪ್ರಕಟಿಸಿದೆ. ವರದಿಯ ಪ್ರಕಾರ ಮರಣೋತ್ತರ ಪರೀಕ್ಷೆಯಲ್ಲಿ ಪಾಲ್ಗೊಂಡ ವೈದ್ಯರ ಗುಂಪು ಆಕೆಯ ಗರ್ಭಕೋಶದಲ್ಲಿ ಗಡುಸಾದ ದ್ರವ ಕಂಡು ಬಂದಿದ್ದು ಇದು ಗರ್ಭಾವಸ್ಥೆಯ ಆರಂಭಿಕ ಹಂತವಾಗಿರಬಹುದು ಎಂದು ಹೇಳುತ್ತಿದ್ದಾರೆ. ಗರ್ಭಾವಸ್ಥೆಯೋ ಅಥವಾ ಗರ್ಭಕ್ಕೆ ಏನಾದರೂ ಸೋಂಕು ತಗುಲಿತ್ತೇ ಎಂದು ಖಚಿತ ಪಡಿಸಲು ಆ ದ್ರವವನ್ನು ಹಿಸ್ಟೋಪೆಥಾಲಜಿ ಪರೀಕ್ಷೆಗೆ ಕಳುಹಿಸಲಾಗಿದೆ.
ನಿನ್ನೆ ಸಂಜೆ ಪ್ರತ್ಯೂಷಾ ಶವ ಸಂಸ್ಕಾರವನ್ನು ನಡೆಸಲಾಯಿತು. ಸಂಪೂರ್ಣ ಕಿರುತೆರೆ ಜಗತ್ತು ಮುದ್ದು ಮೊಗದ ನಟಿಗೆ ವಿದಾಯ ಹೇಳಲು ನೆರೆದಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಉಸಿರುಗಟ್ಟಿ ಸತ್ತಿದ್ದಾಳೆ ಎಂಬುದು ಬಹಿರಂಗವಾಗಿದ್ದು ಇದೊಂದು ಆತ್ಮಹತ್ಯೆ ಎಂಬುದು ಸಾಬೀತಾಗಿದೆ.ಆದರೆ ಆಕೆಯನ್ನು ಹತ್ತಿರದಿಂದ ಬಲ್ಲ ಕಿರುತೆರೆ ಸ್ಟಾರ್‌ಗಳು ಇದು ಆತ್ಯಹತ್ಯೆ ಅಲ್ಲ. ವ್ಯವಸ್ಥಿತ ಕೊಲೆ ಎಂದು ಹೇಳುತ್ತಿದ್ದಾರೆ. ಜತೆಗೆ ನಟಿಯ ಪೋಷಕರು ಸಹ ಮಗಳ ಸಾವಿಗೆ ಆಕೆಯ ಪ್ರಿಯಕರ ರಾಹುಲ್ ರಾಜ್ ಸಿಂಗ್ ಹೊಣೆ ಎಂದು ದೂರುತ್ತಿದ್ದಾರೆ.

0 comments:
Post a Comment