ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಮತ್ತು ಅವರ ಧರ್ಮ ಪತ್ನಿ ಭಾರತಿ ಜೋಡಿ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಜೋಡಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಈಗ ಬರೊಬ್ಬರಿ 36 ವರ್ಷಗಳ ಬಳಿಕ ಅವರಿಬ್ಬರು ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ಅದು ಹೇಗಪ್ಪಾ ಅಂತೀರಾ? ಮುಂದೆ ಓದಿ.
ರಾಜಾ ಸಿಂಹ ಚಲನಚಿತ್ರದಲ್ಲಿ ಈ ತಾರಾ ದಂಪತಿ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಪಾತ್ರದಲ್ಲಿ, ಅವರೇ ಅಭಿನಯಿಸಿದ್ದ ಸಿಂಹಾದ್ರಿಯ ಸಿಂಹ ಚಿತ್ರದ ಪಾತ್ರದ ಪ್ರಭಾವ ಕಾಣಲಿದೆ. ಗ್ರಾಫಿಕ್ಸ್ ಮೂಲಕ ಅವರನ್ನು ತೆರೆಯ ಮೇಲೆ ತರಲಾಗುತ್ತಿದೆ.
ಸಿನಿಮಾದ ಮತ್ತೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ವಿಷ್ಣು ಮತ್ತು ಭಾರತಿ ಅವರು ಅನಿರುದ್ಧ( ನಿಜ ಜೀವನದ ಅಳಿಯ) ಅವರ ತಂದೆ-ತಾಯಿಗಳಾಗಿ ನಟಿಸಲಿದ್ದಾರೆ.
ಚಿತ್ರಕಥೆ ಮತ್ತು ನಿರ್ದೇಶನ ರವಿ ರಾಮ್ ಅವದಾಗಿದ್ದು ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುವ ಸಾಹಸಕ್ಕೆ ಅವರಿಳಿದಿದ್ದಾರೆ. ಸಿ.ಡಿ ರಾಜಣ್ಣ ಚಿತ್ರವನ್ನು ನಿರ್ಮಿಸುತ್ತಿದ್ದು, ನಿಕಿತಾ ತುಕ್ರಾಲ್ ನಾಯಕಿ ಪಾತ್ರದಲ್ಲಿ ಮಿಂಚಲಿದ್ದಾರೆ.

0 comments:
Post a Comment