Cinema News

ಶೂಟಿಂಗ್ ಮುಗಿಸಿದ 'ರನ್ ಆಂಟನಿ'

ವಿನಯ್ ರಾಜ್ ಕುಮಾರ್ ಅವರ ದ್ವಿತೀಯ ಚಿತ್ರ  'ರನ್ ಆಂಟನಿ' ಚಿತ್ರೀಕರಣ ಮುಗಿದಿದೆ. ರಘು ಶಾಸ್ತ್ರೀ ಅವರ ಚೊಚ್ಚಲ ನಿರ್ದೇಶನ ಚಿತ್ರಕ್ಕಿದ್ದು ಮುಂದಿನ ತಿಂಗಳ ಅಂತ್ಯದಲ್ಲಿ ಚಿತ್ರ ತೆರೆ ಕಾಣುತ್ತಿದೆ.

ಡಿಸೆಂಬರ್ ತಿಂಗಳಲ್ಲಿ ಶೂಟಿಂಗ್ ಪ್ರಾರಂಭಿಸಿದ್ದ ಚಿತ್ರ 60 ದಿನ ಚಿತ್ರೀಕರಣ ನಡೆಸಿದೆ. ಮೇ ತಿಂಗಳ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ರುಕ್ಷಾರ್ ಮೀರ್ ಮತ್ತು ನಟಿ ಸುಶ್ಮಿತಾ ಜೋಶಿ ಚಿತ್ರದ ನಾಯಕಿಯರಾಗಿದ್ದಾರೆ.

ಪಾರ್ವತಮ್ಮ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಗುರು ರಾಜ್ ಕುಮಾರ್ ಚಿತ್ರವನ್ನು ನಿರ್ಮಿಸಿದ್ದು ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.

ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು  ಸುಶ್ಮಿತಾ ಜೋಶಿ, ದೇವರಾಜ್, ಬುಲೆಟ್ ಪ್ರಕಾಶ್ ಕೂಡ ತಾರಾಗಣದಲ್ಲಿದ್ದಾರೆ.

About jaya G B

0 comments:

Post a Comment

Powered by Blogger.